
ಬಣ್ಹ ಹಚ್ಚಿದ ಮುಖದಲ್ಲೆನೋ ನೋವು
ಪಾತ್ರದ ಚಹರೆಯಲ್ಲೆನೊ ನಗು
ಆತನಾಟಕ್ಕೆ ನಾ ಕುಣಿದಾಗ
ಚಪ್ಪಾಳೆ ತಟ್ಟೊನು ಅವನು
ನಾ ಆಡಿದ ಈ ಮಾತಿಗೆ
ಮಾತೊದೋರೂ ನೀವು
ಈ ಪರದೆಯ ಹಿಂದಿದೆ ಒಂದು ಕಥೆ
ಸಾಗಿದೆ ನನ್ನೀ ಬಾಳಿನ ಜೊತೆ
ಬದುಕೆಂಬ ರಂಗ ಮಂದಿರದಲ್ಲಿ
ವಾಸ್ತವ ಎಂಬ ನಾಟಕದಲ್ಲಿ
ಹೊಟ್ಟೆಪಾಡೆಂಬ ಪಾತ್ರದಲ್ಲಿ
ನಾನು ಅವನ ಜೊತೆ… ಅವನು ನನ್ನ ಜೊತೆ
ಅವನು ಹಚ್ಚಿದ ಬಣ್ಹ ಕೊನೆವರೆಗೆ
ನಾನು ಹಚ್ಚಿದ ಬಣ್ಹ ಕೆರೆವರೆಗೆ
ನಾನು ನಾನೆಂದಾಗ ನಾನಲ್ಲ
ಅದು ನನ್ನ ಮೂಢತನದ ಬಣ್ಹ
ನಾಳೆ ಅನ್ನೋದು ಕಾರಣವಲ್ಲ
ಅದು ಅವನು ಚೆಲ್ಲಿದ ಭಾಸ್ಕರ ಬಣ್ಣ
